Aduge

ಇದು ಕನ್ನಡದ ಅಡುಗೆ ಮನೆ

ಅಡುಗೆ ಬಗೆಗೆ ಒಂದಿಷ್ಟು

ಅಡುಗೆ ಅನ್ನುವುದು ಕಲೆ ಮತ್ತು ವಿಜ್ಞಾನನವೂ ಹೌದು. ಅಡುಗೆ ಮಾಡುವ ಬಗೆಗೆ "ಪಾಕಶಾಸ್ತ್ರ" ಎ೦ದು ಕರೆಯುವುದೂ ಉಂಟು. ಅಹಾರವನ್ನು ಬೇಕಾದ ರೀತಿಯಲ್ಲಿ ಬೇಯಿಸಿ ತಯಾರಿಸುವುದೇ ಅಡುಗೆ. ಉಪ್ಪು, ಹುಳಿ, ಕಾರಾ, ಸಿಹಿ, ಕಹಿ ಹೀಗೆ ಇನ್ನಷ್ಟು ಸ್ವಾದಗಳ ಸವಿ. ಮನುಷ್ಯನ ಆರೋಗ್ಯ ಮತ್ತು ಬೆಳವಣಿಗೆಯ ಪ್ರಮುಖ ಭಾಗ. ಅಡುಗೆಯಲ್ಲಿ ಆಗುವ ಬದಲಾವಣೆ ನಾಗರೀಕತೆಯ ಬೆಳವಣಿಗೆ ಸಂಕೇತ.



ಈ ವೆಬ್-ಸೈಟ್ ನಲ್ಲಿ ಏನು ವಿಶೇಷ?!

ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಮೂಲ ಅಡುಗೆಯ ರುಚಿ ಮರೆತು ಹೋಗಿದೆ. ರೆಡಿಮೇಡ್ ಮಿಕ್ಸ್ ಗಳ ಹಾವಳಿ ದಾಳಿ ಇಟ್ಟಿದೆ. ಆದರೆ ಈ ವೆಬ್ ಸೈಟ್ ನಲ್ಲಿ. ರೆಡಿಮೇಡ್ ಮಿಕ್ಸ್ ಇಲ್ಲದೆ ಕರ್ನಾಟಕದ ಮೂಲ ಅಡುಗೆಯನ್ನು ಮಾಡುವ ಬಗೆಯನ್ನು ವಿವರಿಸಲಾಗಿದೆ. ಜೊತೆಗೆ ಸುಲಭ ವಿಧಾನವನ್ನು ಹೇಳಲಾಗಿದೆ. ಅಡುಗೆಗಳನ್ನು ಅನುಗುಣವಾಗಿ ವಿಂಗಡಿಸಿ ಅದಕ್ಕೆ ಸೂಕ್ತವಾದ ವೀಡಿಯೋ ಲಿಂಕುಗಳಿದ್ದಲ್ಲಿ ಅದನ್ನೂ ನೀಡುವ ಪ್ರಯತ್ನ ಮಾಡಲಾಗಿದೆ. ದಿನ ನಿತ್ಯದ ಅಡುಗೆಗಳಿಂದ ಹಿಡಿದು ಹೊಸಬೆಗೆಯ ರೆಸಿಪಿ ನೀಡಿದ್ದೇವೆ.



!!ನಿಮ್ಮ ಹೊಸ ರೆಸಿಪಿಗಿದೆ ಅವಕಾಶ!!

ನೀವು "ಪಾಕಶಾಸ್ತ್ರ-ಪ್ರವೀಣ"ರಾಗಿದ್ದಲ್ಲಿ ನಿಮ್ಮ ಹೊಸ ರೆಸಿಪಿಯನ್ನು ನಮಗೆ ಕಳುಹಿಸಿ. ನಿಮ್ಮ ಹೆಸರಿನ ಟಾಗ್ (TAG) ನಲ್ಲಿಯೇ, ನೀಮ್ಮದೇ ಹೆಸರಿನಲ್ಲಿ ಅದನ್ನು ಪ್ರಕಟಿಸುತ್ತೇವೆ. ಹೆಚ್ಚಿನ ವಿವರಕ್ಕೆ "ನಿಮ್ಮ-ರೆಸಿಪಿ" ವಿಭಾಗ ನೋಡಿ.
ಕರ್ನಾಟಕದ ವಿವಿಧ ರೀತಿಯ ಅಡುಗೆಗಳನ್ನು. ಕನ್ನಡದಲ್ಲೇ ಅಚ್ಚುಗಟ್ಟಾಗಿ ಹೇಳುವ ಪ್ರಯತ್ನ ಇದು.

ಈ ಜನುಮವೇ!!!!!

ಈ ಜನುಮವೆ ಅಹ! ದೊರಕಿದೆ ರುಚಿ ಸವಿಯಲು
ಈ ಜಗವಿದೆ ನವ ರಸಗಳ ಉಣಬಡಿಸಲು
ಬಿಸಿ ಬಿಸಿ ಇದೆ ನಳ ಪಾಕ ದಿನ ದಿನ ನೂತನ
ಈ ಬಿಸಿಯು ಆರುವ ಮುನ್ನ ಎಲ್ಲರ ಜೊತೆಯ ನೆಲ್ಲುವ ಕಲೆಯೆ ಜೀವನ||ಪಲ್ಲವಿ||

ಕುಚ್ಚಲು ಗಂಜಿ ಉಪ್ಪಿನ ಕಾಯಿ ಹೇಗೆ ಮಾಡಿದೆ ಗೆಳೆತನ?!
ತುಪ್ಪಕ್ಕೆ ಬಿದ್ದ ಹೊಳಿಗೆ ಗೀಗ ಬೇಕು ಮಾವಿನ ರಸಯನ
ಹುಬ್ಬಳ್ಳಿ ರೊಟ್ಟಿ ಸಾರು, ತಿಂದೊನೆ ಗಟ್ಟಿ ಆಳು
ಮಂಡ್ಯದ ಮುದ್ದೆ ಬಾಡು, ಉಂಡು ನೀ ನಿದ್ದೆ ಮಾಡು
ಅಂಕೊಲ ಕೋಳಿ ಸಾರು, ಮೂಗಲ್ಲು ನೀರು ಜೋರು
ಕುಂದಾಪುರ ಕಾಣೆ ಮೀನು, ಇನ್ನೆಲ್ಲು ಕಾಣೆ ನೀನು
ಹಂಚಿ ಉಂಡರೆ ಅದಿಕ ವಾಗುವ ಸರಳ ಸ್ನೇಹದ ವಿರಳ ರುಚಿ ಇದು||೧||

ದುಡಿವ ಜನರು ಬಿಡುವಿನಲ್ಲಿ ತೆರೆವ ಬುಟ್ಟಿಯೆ ಬಲು ರುಚಿ
ಬೆರಳ ಚೀಪಿ ಉಂಡ ಮನಕೆ, ಬದುಕಿನಲ್ಲಿಯು ಅಭಿರುಚಿ
ಮಾವಿನ ಕಾಯಿ ಚಿತ್ರನ್ನನ ಮೈಸುರಲ್ಲಿ ತಿಂದೊನ್ ಜಾಣ
ಮನೆಗೆ ಎಷ್ಟೇ ನೆಟ್ರು ಬರಲಿ, ಮಲೆನಾಡಲ್ಲಿ ತಾಜ ತಂಬ್ಳಿ
ದಾವಣಗೆರೆ ಬೆಣ್ಣೆ ದೋಸೆ ಈ ಉರಲ್ಲಿ ತಿನ್ನೊ ಆಸೆ!!
ಮೊಟ್ಟೆ ಮತ್ತು ಬಿರಿಯನಿಗೆ ಬಬಾರೊ ಬೆಳಗಾವಿಗೆ
ಒಲೆಯ ಮುಂದೆ ಉರಿವ ಅಮ್ಮನ ಮಮತೆ ಇಂದಲಿ ಕಲಿತ ಫಲವಿದು||೨||
ಜನುಮವೇ..... -ಜಯಂತ ಕಾಯ್ಕಿಣಿ (ಒಗ್ಗರಣೆ ಚಿತ್ರಕ್ಕೆ)

2 comments:

  1. ಸೂಪ್ಪು ಸಾಂಬರ್ ಮಾಡುವುದು ಹೇಗೆ?

    ReplyDelete
  2. ಸೂಪ್ಪು ಸಾಂಬರ್ ಮಾಡುವುದು ಹೇಗೆ?

    ReplyDelete